ಕಾರವಾನ್

 ದೆಹಲಿಯಿಂದ ಪ್ರಕಟವಾಗುತ್ತಿರುವ ಒಂದು ಇಂಗ್ಲಿಷ್ ಪತ್ರಿಕೆ. ಸಂಪಾದಕ ಮತ್ತು ಪ್ರಕಾಶಕ: ವಿಶ್ವನಾಥ್, ಡೆಲ್ಲಿ ಪ್ರೆಸ್ ಸಮಾಚಾರ್ ಪತ್ರ (ಪೈ.) ಲಿಮಿಟೆಡ್‍ನ ಪರವಾಗಿ.

 ಪ್ರಚಲಿತ ಸಮಸ್ಯೆಗಳ ಮೇಲೆ ಪರಿಣತರು ಬರೆದ ಲೇಖನಗಳು, ಸುದ್ದಿಯ ಹಿನ್ನೆಲೆ, ಸಾಹಿತ್ಯ, ಕಲೆ, ಕ್ರೀಡೆ, ವಿಜ್ಞಾನಗಳೇ ಮುಂತಾದ ಕ್ಷೇತ್ರಗಳ ಪರಿಚಯಗಳು, ಕತೆಗಳು, ಧಾರಾವಾಹಿ ಕಾದಂಬರಿ, ಚಿತ್ರಗಳು, ವ್ಯಂಗಚಿತ್ರಗಳು, ಚಲನಚಿತ್ರವಿಹಾರ, ಪದ್ಯಗಳು, ವಾಚಕರ ಪತ್ರಗಳು ಮುಂತಾದವನ್ನೊಳಗೊಂಡ ಈ ವೈವಿಧ್ಯಮಯ ಪತ್ರಿಕೆಯ ಪ್ರಥಮ ಸಂಚಿಕೆ ಪ್ರಕಟವಾದ್ದು 1940ರ ಜೂನಿನಲ್ಲಿ. ಈಗ `ಕಾರವಾನ್' ಪ್ರಕಟಣೆ ನಿಂತಿದೆ. ಅದರ ಸ್ಥಾನದಲ್ಲಿ `ಅಲೈನ್' ಜನ್ಮ ತಾಳಿದೆ. ವಿಶ್ವನಾಥ ನಿಧನಾನಂತರ ರಾಕೇಶ್‍ನಾಥ ಸಂಪಾದಕರಾಗಿದ್ದಾರೆ. 

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

(ಎಚ್.ಎಸ್.ಎಚ್.)